ಪ್ರೇಮಿಗಳ ದಿನಾಚರಣೆಯ ದಿನ ಒಂದು ಪ್ರಸಂಗ :
ಬೆಳಗಿನ ಜಾವ ಎಂದಿನಂತೆ ವಾಕಿಂಗ್ ಮುಗಿಸಿ ಮನೆಗೆ ಬರುತಿದ್ದೆ, ಸಮಯ ೭ ಘಂಟೆ ಮನೆಯ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಪಕ್ಕದಲ್ಲಿ ಒಂದು ಹುಡುಗ ಬೈಕ್ ನಿಲ್ಲಿಸಿ ಹುಡುಗಿ ಜೊತೆ ಮಾತಾಡ್ತಾ ನಿಂತಿದ್ದ. ಅವಳು ಬಸ್ಸಿನಲ್ಲಿ ಹೋಗಲು ಬಸ್ ನಿಲ್ದಾಣಕ್ಕೆ ಬರುವವಳಿರಬೇಕು ಅವನು ಇದೆ ಸರಿಯಾದ ಜಾಗ ಮತ್ತು ಸಮಯ ಎಂದು ತಿಳಿದು ಅವಳನ್ನು ಭೇಟಿಯಾಗಿದ್ದ. ಅವರ ಪಕ್ಕ ಹೋಗುವಾಗ ಅವರ ಮಾತುಕತೆ ನನ್ನ ಕಿವಿಗೆ ಬಿತ್ತು .ನನಗೆ ಇವತ್ತು ಪ್ರೇಮಿಗಳ ದಿನಾಚಾರಣೆ ನೆನಪಾಯಿತು ಕೂತುಹಲದಿಂದ ನಾನು ಸ್ವಲ್ಪ ಅವರ ಮಾತನ್ನ ಆಲಿಸಿದೆ(ತಪ್ಪು ಅಂತ ಗೊತ್ತಿದ್ದು).
ಅವಳು ಬೇಡ ಇದನ್ನು ನೋಡಿದರೆ ನಮ್ಮ ಅಮ್ಮ ಬೈತಾರೆ ಅಂತಿದ್ಲು . ಅವನು ಏನು ಆಗಲ್ಲಾ ಕ್ಯಾರಿ ಬ್ಯಾಗ ತೆಗೆದು ನೋಡು ಅಂತಿದ್ದಾ. ಕೋನೆಗೆ ಅವಳು ಒಪ್ಪಿ ಕ್ಯಾರಿ ಬ್ಯಾಗ ತೆಗೆದು ಕೊಂಡು ತೆರೆದು ನೋಡಿದಳು ಅದರಲ್ಲಿ ಒಂದು ಕೆಂಪು ಗುಲಾಬಿ ಮತ್ತು ಚೇಂದನೆಯ ಗಿಫ್ಟ್ಟ್ ಬಾಕ್ಸ್ ಇತ್ತು. ಅವಳು ಗಿಫ್ಟ್ ಬಾಕ್ಸ್ ತೆರೆದಾಗ ಅದರಲ್ಲಿ ಚಿಕ್ಕದಾದ ಉಡುಗೋರೆ ಇತ್ತು (ಬಹುಶ: ಜಾಸ್ತಿ ಬೆಲೆಯ ಉಂಗುರ ಇರಬೇಕು) ಅವನು ಅವಳ ಕಿವಿಯ ಹತ್ತಿರ ಎನೋ ಪಿಸುಮಾತನಾಡಿ ಎನೋ ಸಾಧಿಸಿದ ಹುಮ್ಮಸ್ಸಿನಲ್ಲಿ ಬೈಕ ಜೋರಾಗಿ ಓಡಿಸಿಕೊಂಡು ಹೋದ. ಅತ್ತ ಅವನು ಹೋದ ತಕ್ಷಣ ಅವಳು ಜೋರಾಗಿ ತು... ಅಂತ ಉಗಳಿ ಗುಲಾಬಿಯನ್ನು ರಸ್ತೆ ಬದಿಗೆ ಎಸೆದು ಉಡುಗೋರೆಯನ್ನು ವ್ಯಾನಿಟಿ ಬ್ಯಾಗಿಗೆ ಸೇರಿಸಿ ಬಸ ಹತ್ತಿದಳು. ನಾನು ಕಾಕಾ ಅಂಗಡಿಯ ಕಾಫಿ ಕುಡಿದು ಬರುವಾಗ ಅವಳು ಎಸೆದ ಆ ಗುಲಾಬಿಯನ್ನು ನೋಡಿದಾಗ ಅದು ನನಗೆ ಹೇಳಿದ ಹಾಗಿತ್ತು : "Happy Valentine's Day
1 ಕಾಮೆಂಟ್:
classical aagide sir ee kathe..
nice writeup.. :)
ಕಾಮೆಂಟ್ ಪೋಸ್ಟ್ ಮಾಡಿ