ಬುಧವಾರ, ಅಕ್ಟೋಬರ್ 7, 2009

ಇದು ಕಥೆಯಲ್ಲ ....... ನೈಜ ಘಟನೆ......

             ಇದು ನಡೆದಿದ್ದು ೯೦ ರ ದಶಕದ ಉತ್ತಾರಾರ್ಧದಲ್ಲಿ, ನಾನಾಗ ಇಂಜನಿಯರಿಂಗ್ ಪದವಿ  ಪರೀಕ್ಷೆ ಮುಗಿಸಿ ಬಿಜಾಪುರ ಹತ್ತಿರವಿರುವ ನಂದಿ ಶುಗರ್ಸ್ ನಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಅಂತ ಕೆಲಸಕ್ಕೆ ಹೋಗ್ತಾ ಇದ್ದೆ. ನನ್ನ ಊರು(ಹೊಸುರ) ಅಲ್ಲಿಯೇ ಸಮೀಪ ಇರುವದರಿಂದ ಊರಿನಿಂದ ಹೋಗಿ ಬಂದು ಮಾಡ್ತಾ ಇದ್ದೆ. 
                        ಒಂದು ದಿನ ಕೆಲಸ ಬಹಳ ಇದ್ದುದರಿಂದ ರಾತ್ರಿ ಎರಡು ಘಂಟೆಯವರೆಗೆ ಇದ್ದೆ. ನಂತರ ಊರಿಗೆ ಹೋಗುವ ವಿಚಾರ ಮಾಡಿದೆ ಯಾಕೆಂದರೆ ಅಲ್ಲಿ ಮಲಗಲು ವ್ಯವಸ್ಥೆ ಇರಲಿಲ್ಲ  ಮತ್ತು ಅಲ್ಲಿಯೇ ಇದ್ದರೆ ಬೇಗನೆ ಏಳಬೇಕಾಗುತಿತ್ತು ಊರಿಗೆ ಹೋದರೆ ನಿರಾಳವಾಗಿ ಮಲಗಬಹುದು ಎಂದು ಹೋಗಲು ಸಿಧ್ದವಾದೆ. ಆದರೆ ಊರು ಅಲ್ಲಿಂದ ನಾಲ್ಕು ಕಿ.ಮಿ. ದೂರ ಇತ್ತು. ಆಗ ಕಬ್ಬು ತಂದಿದ್ದ ಟ್ಯಾಕ್ಟರ ಚಾಲಕನೋಬ್ಬ " ಸರ್ ನಿಮ್ಮನ್ನು ಕ್ರಾಸ್ ವರೆಗೆ ಟ್ಯಾಕ್ಟರನಲ್ಲಿ ಬಿಡುತ್ತೇನೆ ಅಲ್ಲಿಂದ ನೀವು ಹೋಗಬಹುದು " ಅಂದ. ಹುಣ್ಣಿಮೆ ಹತ್ತಿರ ಇತ್ತು ಅಂತ ಕಾಣುತ್ತೆ ಅಂದು ಬೆಳದಿಂಗಳ ರಾತ್ರಿ ಇತ್ತು ಅಲ್ಲಿಂದ ಎರಡು ಕಿ.ಮಿ ದೂರ ಹೋಗಬಹುದು ಎಂದು ತಿರ್ಮಾನಿಸಿ ಹೋರಟೆ.
            ನನ್ನನ್ನು ಕ್ರಾಸ್ ನಲ್ಲಿ ಇಳಿಸಿ ಅವನು ಹೋರಟು ಹೋದ. ನಾನು ಊರಿನತ್ತ ಮುಖ ಮಾಡಿ ನಡೆಯುತ್ತಿದ್ದೆ, ಸುತ್ತಲು ಖಾಲಿ ಹೋಲಗಳು, ದೂರದಲ್ಲಿದ್ದ ಬೀದಿ ದೀಪಗಳು ಕಾಣುತಿದ್ದವು ಹಾಗೂ ನಾಯಿಗಳ ಬೋಗುಳುವಿಕೆ ಕೇಳಿಸುತ್ತಿತ್ತು. ಬೇಡವೆಂದರೂ ಮನಸ್ಸಿನಲ್ಲಿ ದೆವ್ವ, ಭೂತಗಳ ವಿಚಾರ ಸುಳಿಯತೊಡಗಿತು.  ದಾರಿಯಲ್ಲಿದ್ದ  ಕರಿಯಮ್ಮನ ದೇವಸ್ಥಾನದ ಹತ್ತಿರ ಬನ್ನಿ ಗಿಡದಲ್ಲಿ ಹೆಣ್ಣುಮಗಳೊಬ್ಬಳು ನೇಣು ಹಾಕಿಕೊಂಡಿದ್ದಳು ಅಂತ ಯಾರೋ ಹೇಳಿದ್ದ ನೆನಪಾಯಿತು. ದೆವ್ವಗಳು ಬೇರೆ ಬೇರೆ ರೂಪ ತಾಳುತ್ತವೆ, ನಾಯಿಯಾಗಿ ಹಿಂಬಾಲಿಸುತ್ತವೆ,ಮುದುಕಿಯಾಗಿ ನಿಲ್ಲುತ್ತವೆ ಅಂತ ಕೇಳಿದ್ದೆ. ಅದಕ್ಕೆ ರಾತ್ರಿ ಹೊತ್ತು ನೀರು ಅಥವಾ ಬೆಂಕಿ ಇರಬೇಕೆನ್ನುತ್ತಿದ್ದರು. ನಾನು ಇವೆಲ್ಲವನ್ನು ನಂಬುತ್ತಿರಲಿಲ್ಲ ಆದರೂ ಕೂಡ ಬೇಡ ಬೇಡವೆಂದರೂ ನೆನಪಾಗತೊಡಗಿತು.
           ಹೀಗೆ ಯೋಚಿಸುತ್ತಾ ಸಾಗುತ್ತಿರುವಾಗ ದೂರದಲ್ಲಿ ಆ ಗಿಡದ ಹತ್ತಿರ ರಸ್ತೆಯಲ್ಲಿ ಒಂದು ಆಕೃತಿ ಗೋಚರಿಸತೋಡಗಿತು.  ಏನೋ ಗಿಡ ಅಥವಾ ಪೊದೆ ಇರಬೇಕೆಂದು ನೋಡಿದಾಗ ಯಾರೋ ಮನುಷ್ಯರು ಬರುತ್ತಿದ್ದಾರೆ ಅನ್ನಿಸಿತು, ರಾತ್ರಿ ಹೋತ್ತು ೨ ಘಂ. ಯಾರಿರಬಹುದು ಹೊಲಕ್ಕೆ ಹೋರಟ ರೈತರಿರಬೇಕೆಂದು  ಭಾವಿಸಿ ದಿಟ್ಟಿಸಿದಾಗ ಅಲ್ಲಿ ಸ್ವಲ್ಪ ಬಿಳಿ ಸೀರೆಯುಟ್ಟ ಹೆಣ್ಣುಮಗಳು ಇದ್ದಳು..............  
                ಸಣ್ಣಗೆ ಮೈಯಲ್ಲಿ ನಡುಕ ಶುರುವಾಯಿತು, ಗಂಟಲು ಒಣಗಲು ಪ್ರಾರಂಭಿಸಿತು, ಅವಳು ನನ್ನ ಕಡೆಗೆ ಬರುತ್ತಿದ್ದಳು. ನನಗೆ ಏನು ತೊಚುತ್ತಿಲ್ಲ  ಹಿಂದೆ ನೋಡಿದೆ ಅದಾಗಲೇ ಅರ್ಧ ದಾರಿ ಬಂದಾಗಿತ್ತು, ಓಡಿ ವಾಪಸ ಹೋಗಬೇಕು ಅಂದರೆ ಎಲ್ಲಿ ಅಂತ, ಎಷ್ಟು ದೂರ ಅಂತ ಹೋಗುವದು, ಕೂಗಬೇಕೆಂದರೆ ಯಾರು ಕೇಳುವರು ನನ್ನ ಕೂಗು.  ತಂದೆ,ತಾಯಿ,ತಂಗಿ,ಗೆಳೆಯರು ಮತ್ತು ಎಲ್ಲರೂ ಒಂದು ಕ್ಷಣ ನೆನಪಾದರು. ಮುಂದೆ ನೋಡಿದೆ ಅವಳು ಮತ್ತಷ್ಟು ಹತ್ತಿರ ಬರುತ್ತಿದ್ದಳು ಮೈಯಲ್ಲಾ ಬೆವರಲು ಪ್ರಾರಂಭಿಸಿತು.  ಬೇರೆ ದಾರಿಯಿರಲಿಲ್ಲ ಬಂದು ತಪ್ಪು ಮಾಡಿದೆ ಅನಿಸಿತು, ಜೀವದ ಆಸೆ ಬಿಟ್ಟು ಮುಂದೆ ನಡೆಯತೊಡಗಿದೆ. ಅವಳು ದಾರಿಯ ಆ ಪಕ್ಕ ನಡೆಯುತ್ತಿದ್ದಳು ನಾನು ಈ ಪಕ್ಕಕ್ಕೆ ನಡೆಯತೊಡಗಿದೆ. ತೀರ ಸಮೀಪ ಬಂದಳು ನನಗೆ ದೈರ್ಯ ಸಾಲಲಿಲ್ಲ ಕಣ್ಣು ಮುಚ್ಚಿದೆ. ಹಾಗೆ ನಡೆದೆ ಸ್ವಲ್ಪ ಕಣ್ಣು ಬಿಟ್ಟು ನೋಡಿದಾಗ ಅವಳು ಪಕ್ಕದಲ್ಲಿ ದಾಟಿ ಮುಂದೆ ಸಾಗಿದಳು ನಾನೂ ಉಸಿರು ಬಿಗಿ ಹಿಡಿದು ಮುಂದೆ ಸಾಗಿದೆ.   ದೆವ್ವಕ್ಕೆ ಕಾಲು(ಪಾದ) ತಿರುಗಿರುತ್ತವೆ ಮತ್ತು ಸ್ವಲ್ಪ ಸಮಯದ ನಂತರ ದೆವ್ವ ಮಾಯವಾಗುತ್ತವೆ ಅಂತ ಕೇಳಿಪಟ್ಟಿದ್ದರಿಂದ ಕೂತುಹಲದಿಂದ ಮೊಂಡು ಧೈರ್ಯ ಮಾಡಿ ಹಿಂತಿರುಗಿ ನೋಡಿದೆ.  ಅವಳ ಪಾದ ಕಾಣಲಿಲ್ಲ ಅವಳೂ ಮಾಯವಾಗಿರಲಿಲ್ಲ ತನ್ನ ಪಾಡಿಗೆ ತಾನೆಂಬಂತೆ ಹೋಗ್ತಾ ಇದ್ದಳು. ನಾನೂ ಊರ ಕಡೆಗೆ ಸನ್ನಿ ಹಿಡಿದಂತೆ ಬಿರುನಡಿಗೆಯಲ್ಲಿ ನಡೆದೆ.
               ಊರ ಶಾಲೆಯ ಹತ್ತಿರ ಬಂದೆ ಬೀದಿ ದೀಪ ಬೇಳಗುತಿತ್ತು "ಬದುಕಿದೆಯಾ ಬಡಜೀವವೆ ಅಂತ" ಮನಸ್ಸಿನಲ್ಲಿ ಅಂದು ಕೋಳ್ಳುತ್ತಿದ್ದಾಗ, ಸೈಕಲಿನಲ್ಲಿ ನಮ್ಮ ಊರಿನವನೇ ಆದ ಹೊಲದಲ್ಲಿ ಕೇಲಸಕ್ಕೆ ಬರುವ ರಾಮ (ಬಹುಶ ರಾಮ ಇರಬಹುದು,ಹೆಸರು ನೆನಪಿಲ್ಲ)  ಎದುರಿಗೆ  ಬಂದ, ಅವನ ಮುಖದಲ್ಲಿ ಗಾಬರಿಯಿತ್ತು. ಬೇಳಕಿನಲ್ಲಿ ನನ್ನ ಗುರುತು ಹಿಡಿದು ಪ್ಯಾಕ್ಟರಿಯಿಂದ ಈಗ ಬಂದ್ರಾ ಗೌಡ್ರೆ ಅಂತ ಕೇಳಿದ. ನಾನು ಹೌದು ಅಂದೆ. ನನ್ನ ಮಗಳು ಮನೆಯಲ್ಲಿ ಜಗಳವಾಡಿ ಹೋಗಿದ್ದಾಳೆ ದಾರಿಯಲ್ಲಿ ನಿಮಗೆ ಭೇಟಿ ಆದಳಾ ಅಂತಾ ಕೇಳಿದ.   ಹಾ...... ಅಂತ ನಿಟ್ಟುಸಿರು ಬಿಟ್ಟೆ. ಸಿಟ್ಟು ಮತ್ತು ಅವಳ ಬಗ್ಗೆ ಕನಿಕರ ಒಮ್ಮೇಲೆ ಬಂತು.  "ಹೋದಳು ನೋಡು ಮಾರಾಯಾ" ಅಂತ ನಿರಾಳವಾಗಿ ಉಸಿರಾಡಿದೆ.........  ಆವನು ಸೈಕಲ ಹತ್ತಿ ಆ ಕಡೆಗೆ ಹೋದ...........     
   


(ಇದು ನನ್ನ ಜೀವನದಲ್ಲಿ ನಡೆದ ಸತ್ಯ ಘಟನೆ. ನಿಮ್ಮೇಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು ಅದಕ್ಕೆ ಬರೆಯುತ್ತಿದ್ದೆನೆ. 
ಬರಹದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ದಾಖಲಿಸಿ. ಹಾಗೂ ಎಲ್ಲ ಆತ್ಮಿಯರಿಗೂ ಬ್ಲಾಗಿಗೆ ಭೆಟ್ಟಿ ಕೊಡಲು ತಿಳಿಸಿ)   

12 ಕಾಮೆಂಟ್‌ಗಳು:

ಮನಸು ಹೇಳಿದರು...

ಸರ್,
ಎಂತ ಕಥೆ ಹೇಳಿದಿರಿ ನಾನು ಮೊದ ಮೊದಲು ಹೆದರಿದ್ದೆ... ಹಹಹಹ... ಒಂದು ಅಂತ್ಉ ನಿಜ ನೀವು ಚೆನ್ನಾಗಿ ನಿರೂಪಿಸಿದ್ದೀರಿ ಹೀಗೆ ಬರೆಯುತ್ತಲಿರಿ..
ತುಂಬಾನೇ ಇಷ್ಟವಾಯಿತು.... ಹೀಗೆ ಬರೆಯುತ್ತಲೇ ಇರಿ ಸರ್ ನಾವು ಓದುತ್ತೇವೆ.
ವಂದನೆಗಳು

Unknown ಹೇಳಿದರು...

Good writing....

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

@ಮನಸುರವರೆ,
ಇದು ಕಥೆ ಅಲ್ಲ,ನಿಜವಾಗಿ ನಡೆದಿದ್ದು,ನನಗೆ ಆ ದಿನ ನೆನಪಿಸಿಕೋಂಡರೆ ಈಗಲೂ ಭಯವಾಗುತ್ತದೆ.
ನೀವು ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು.
ಬರೆಯುವ ವಿಷಯ ಸಿಕ್ಕರೆ ಖಂಡಿತ ಬರೆಯಲು
ಪ್ರಯತ್ನಿಸುವೆ.

@ಹರ್ಷ ಅವರೆ ಧನ್ಯವಾದಗಳು

ಶಿವಪ್ರಕಾಶ್ ಹೇಳಿದರು...

Ha Ha Ha....

ಗೌತಮ್ ಹೆಗಡೆ ಹೇಳಿದರು...

hahaha en sir, eno bhaari suspense ankondu oadta hoadre konege kathe e thara mugidu hoaytalla sir:)chennagide.

shivu.k ಹೇಳಿದರು...

ಸರ್,

ಮನಸಲ್ಲಿ ಮೂಡಿದ ಭಯ ಎಂಥೆಂಥ ಸನ್ನಿವೇಶಗಳಿಗೆ ಈಡುಮಾಡುತ್ತದೆ ಅನ್ನುವುದಕ್ಕೆ ನಿಮ್ಮ ಈ ಕತೆಯೇ ಸಾಕ್ಷಿ...

ಚೆನ್ನಾಗಿ ಕುತೂಹಲಬರಿತವಾಗಿ ಬರೆದಿದ್ದೀರಿ..

ದಿನಕರ ಮೊಗೇರ ಹೇಳಿದರು...

ಹೆದರಿಸಿಬಿಟ್ಟಿರಿ ಸರ್,
ಭಯಕ್ಕೆ, ರೂಪ ಮೂಡುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.....ಬರೆಯುತ್ತಾ ಇರಿ......

ತೇಜಸ್ವಿನಿ ಹೆಗಡೆ ಹೇಳಿದರು...

ಮನದೊಳಗಿನ ಭಯದ ಭೂತಕ್ಕಿಂತ ದೊಡ್ಡ ಭೂತ ಯಾವುದೂ ಇಲ್ಲ ಎನ್ನುವ ಅನುಭವ ನನಗೂ ಎಷ್ಟೋ ಸಲ ಆಗಿದೆ. ಆಗುತ್ತಲೂ ಇದೆ. ನಿಮ್ಮ ಘಟನೆಯೂ ಈ ಸತ್ಯಕ್ಕೆ ಒಂದು ನಿದರ್ಶನವಾಗಿದೆ ಎನ್ನಬಹುದು.

Unknown ಹೇಳಿದರು...

Nimma anubhava bhayaanakavaagide saar... huh..

Manasa ಹೇಳಿದರು...

Bhaya annodu namma manasinalli yenta aalavaad bija ooriruttade nodadra... nanaganisad mattakke... namma hiriyaru, navu bega manege baralendu intaha hedarikeyannu haakiruttare... adu navu beledante, bija maravagi, nammannu bega gudu seruvante maduttade... chenagide sir...

hari ಹೇಳಿದರು...

devru idhane antha nambike idhmele devva nu idhey nanna anubduvaku bandidhey adhrey adhanna vadha madoke ogallaa nanu

ರವಿ ಹೇಳಿದರು...

ಬಹಳ ಚೆನ್ನಾಗಿದೆ ನಿಮ್ಮ ಕತೆ ಹ ಹ ಹ...