ಭಾನುವಾರ, ಅಕ್ಟೋಬರ್ 4, 2009

ದೇವರು ಮತ್ತು ಚಟ
ಅಮಾವಾಸ್ಯೆಯ ದಿನ ಮಧ್ಹಾಹ್ನ 11.ಘಂ ಬಿಸಿಲು ಜಾಸ್ತಿಯಾಗುತ್ತಿತ್ತು, ರಾಜು ಕುಂಕುಮ,ಉದಬತ್ತಿ,ಕಡ್ಡಿಪಟ್ಟಣ ಮತ್ತು ನೈವೇದ್ಯ ತೆಗೆದುಕೊಂಡು ಅಮ್ಮ ಹೇಳಿದಂತೆ ಹೋಲದಲ್ಲಿರುವ ಪಂಪಸೆಟ್‍ಗೆ ಪೂಜೆ ಮಾಡಲು ಹೊರಟಿದ್ದ. ಹೋಗುವಾಗ ದಾರಿಯಲ್ಲಿ ಯಾರೋ ಸೇದಿ ಬಿಸಾಕಿದ್ದ ಸಿಗರೇಟಿನ ತುಂಡು ಬಿದ್ದಿತ್ತು, ಅದನ್ನು ನೋಡಿದ ತಕ್ಷಣ ಅವನಿಗೆ ಗೌಡರು ಸುರುಳಿ ಸುರಳಿಯಾಗಿ ಹೊಗೆ ಬಿಡುವ ದೃಶ್ಯ ಕಣ್ಮುಂದೆ ಬಂದಿತು. ಸುತ್ತಮುತ್ತ ನೋಡಿದ ಯಾರು ಕಾಣಲಿಲ್ಲ ನಿಧಾನವಾಗಿ ಕೈಯಲ್ಲಿ ತೆಗೆದುಕೊಂಡು ಮರದಬುಡದಲ್ಲಿರುವ ಕಲ್ಲಿನ ಮೇಲೆ ಕುಳಿತು ಸಿಗರೇಟಗೆ ಬೆಂಕಿ ಹಚ್ಚಿದ. ಸಾವಕಾಶವಾಗಿ ಹೊಗೆಯನ್ನು ಒಳಗೆ ಎಳೆದುಕೊಂಡು ಬಿಟ್ಟ ಮಜಾ ಅನಿಸಿತು. ಮತ್ತೋಮ್ಮೆ ಹೊಗೆಯನ್ನು ಎಳೆದ, ತಕ್ಷಣ ಹೊಗೆ ಗಂಟಲಲ್ಲಿ ಸಿಕ್ಕು ಕೆಮ್ಮಿದ ರಭಸಕ್ಕೆ ಕೈಯಲ್ಲಿರುವ ಕುಂಕುಮ,  ನೈವೇದ್ಯ ಎಲ್ಲ ಕಲ್ಲಿನ ಮೇಲೆ ಚೆಲ್ಲಿಹೋಯಿತು. ಯಾರೋ ಆ ದಾರಿಯಲ್ಲಿ ಬರ್ತಾ ಇದ್ದರು ಅವರನ್ನು ನೋಡಿ ಎಲ್ಲವನ್ನು ಅಲ್ಲಿಯೇ ಬಿಟ್ಟು ಮನೆಕಡೆಗೆ ಹೋಗಿಬಿಟ್ಟ ರಾಜು.
           ದಾರಿಯಲ್ಲಿ ಬರುತ್ತಿದ್ದ ಮದ್ಯವಯಸ್ಕರೊಬ್ಬರು ಒಂದು ಸಮಸ್ಯೆಯಲ್ಲಿ ಸಿಲುಕಿದ್ದರು. ಅದರ ಬಗ್ಗೆಯೆ ಬಿಸಿಲಿನಲ್ಲಿ ಬಳಲಿ ಚಿಂತಿಸುತ್ತಾ ಬರುತ್ತಿರುವಾಗ ದಾರಿಯಲ್ಲಿ ಕಂಡ ಗಿಡದ ನೆರಳಿನಲ್ಲಿ ವಿಶ್ರಮಿಸಲು ನಿಂತರು. ಅವರ ದೃಷ್ಟಿ ಕಲ್ಲಿನ ಮೇಲೆ ಹೊಯಿತು ಮುಳುಗುವವನಿಗೆ ಹುಲ್ಲು ಕಡ್ದಿ ಆಸರೆ ಎಂಬಂತೆ ಕುಂಕುಮ,ನೈವೇದ್ಯ ಬಿದ್ದ ಕಲ್ಲಿಗೆ ನಮಸ್ಕರಿಸಿ ತನ್ನ ಸಮಸ್ಯೆ ಬಗೆಹರಿಸಲು ಕೇಳಿಕೋಂಡ, ಸಂಕಷ್ಟ ದಲ್ಲಿರುವ ಮನುಷ್ಯನಿಗೆ ಕಲ್ಲು ಕೂಡ ದೇವರಂತೆ ಕಂಡಿರುವದು ಅತಿಶಯವೇನು ಅಲ್ಲ.

ಕಾಕತಾಳಿಯವೆಂಬಂತೆ ಮನೆಗೆ ಬರುವಷ್ಟರಲ್ಲಿಅವನ ಸಮಸ್ಯೆ ಬಗೆ ಹರಿದಿತ್ತು. ಆ ಯಜಮಾನನಿಗೆ ತಾನು ಗಿಡದ ಬುಡದಲ್ಲಿ ನಮಸ್ಕಕರಿಸಿದ ದೇವರೇ ನನ್ನ ಸಮಸ್ಯೆ ಬಗೆಹರಿಸಿದ ಎಂದು ತಿಳಿದು ಊರ ಜನರ ಮುಂದೆ ಹೇಳಿದ.


ಕಾಲಚಕ್ರ 20 ವರ್ಷ ಉರುಳಿತ್ತು, ರಾಜು ತರುಣನಾಗಿದ್ದ ಆದರೆ ಸಂಪೂರ್ಣ ಸಿಗರೇಟಿನ ಚಟದ ದಾಸನಾಗಿದ್ದ ಎರಡು ಘಂಟೆ ಕೂಡ ಅವನಿಂದ ಸಿಗರೇಟ ಬಿಡಲು ಆಗುತ್ತಿರಲಿಲ್ಲ ಚಟ ತನ್ನ ಹಟ ಸಾಧಿಸಿತ್ತು. ಇತ್ತ ಗಿಡದ ಬುಡದಲ್ಲಿ ಅಮ್ಮನವರ ದೇವಸ್ಥಾನ ತಲೆ ಎತ್ತಿ ನಿಂತಿತ್ತು ಅದೇ ಮಧ್ಯವಯಸ್ಕ ಅದರ ಪೂಜಾರಿ ಯಾಗಿದ್ದ. ಬೇಡಿದವರಿಗೆ ವರ ದಯಪಾಲಿಸುವ ಸತ್ವವುಳ್ಳ ದೇವತೆ ಆ ಅಮ್ಮ ಆಗಿದ್ದಳು.

ರಾಜುವಿಗೆ ತನ್ನ ಚಟದ ಬಗ್ಗೆ ಕೇಡುಕೆನಿಸಿ ಅದನ್ನು ಬಿಡಬೇಕೆಂದು ತಿರ್ಮಾನಿಸಿದರೂ ಅವನಿಂದ ಆಗುತ್ತಿರಲಿಲ್ಲ ಚಟವೇ ಗೆಲ್ಲುತಿತ್ತು. ಅವನಿಗೆ ಅಮ್ಮನ ದೇವಸ್ಥಾನದ ಮಹಿಮೆ ಬಗ್ಗೆ ಹೇಳಿದರು. ಅಮ್ಮನವರಿಗೆ ಹರಕೆ ಸಲ್ಲಿಸು ನಿನ್ನ ಚಟ ತಾನಾಗಿ ಬಿಟ್ತು ಹೊಗುತ್ತದೆ ಅಂದರು. ರಾಜು ತನ್ನ ಜೀವನದ ಕಡೆಯ ಸಿಗರೇಟ ಎಂದು ಅಂದುಕೊಳ್ಳುತ್ತಾ ಕೋನೆಯ ದಮ್ಮು ಹೋಡೆದು ತನ್ನ ಮೋಟಾರಸೈಕಲಿನಲ್ಲಿ ಅಮ್ಮನವರ ಗುಡಿಗೆ ಹೋರಟ ತೆಂಗಿನಕಾಯಿ ಒಡೆಸಿ, ಪೂಜೆ ಮಾಡಿಸಿ ನನ್ನ ಚಟ ಬಿಡಿಸೆಂದು ಕೇಳಿಕೊಂಡ. ದೇವರು ನನ್ನ ಹರಕೆ ಕೇಳುತ್ತಾಳೆ ಎಂದು ಬಲವಾಗಿ ನಂಬಿ ದೇವಸ್ಥಾನದಲ್ಲಿ 1 ಘಂಟೆ ಕಳೆದು ಇನ್ನುಮುಂದೆ ಸಿಗರೇಟ ಸೇದುವದಿಲ್ಲ ಎಂದು ತಿರ್ಮಾನಿಸಿ ಊರಕಡೆಗೆ ಹೊರಟ.

ಬೈಕಿನಲ್ಲಿ ಹಿಂತಿರುಗಿ ಬರುವಾಗ ಎರಡು ಘಂಟೆ ಆಗ್ತಾ ಇತ್ತು ದೇಹದಲ್ಲಿನ ನಿಕೋಟಿನ್ ಕಡಿಮೆಯಾಗಿ ಸಿಗರೇಟ ಸೇದುವ ಬಯಕೆ ಹೊತ್ತಿಕೊಂಡಿತ್ತು. ತಾನು ಅದಕ್ಕೆ ಸೋಲಬಾರದು ಸೋತರೆ ಚಟವೇ ಗೆದ್ದು ಬಿಡುತ್ತೆ, ದೇವರು ಸೋಲುತ್ತೆ, ಇಲ್ಲದಿದ್ದರೆ ದೇವರು ಗೆಲ್ಲುತ್ತೆ, ಚಟ ಸೋಲುತ್ತೆ. ಯಾವದು ಗೆಲ್ಲುತ್ತೆ ಎಂದು ಮನದಲ್ಲಿ ಅಂದು ಕೋಳ್ಳುತ್ತಾ ಮುಂದಿರುವ ಬಸ್ಸನ್ನು ಹಿಂದೆ ಹಾಕುವ ಭರದಲ್ಲಿ ಮುಂದೆ ಬರುವ ಲಾರಿಗೆ ಗುದ್ದಿ ಬಿಟ್ಟ. ತಲೆಗೆ ಏಟು ಬಿದ್ದಿತ್ತು ಬಸ್ಸಿನಲ್ಲಿಯ ಜನರು ಇಳಿದರು ತಮ್ಮ ಊರಿನ ರಾಜುವನ್ನು ಗುರುತಿಸಿದರು ಬಾಯಲ್ಲಿ ನೀರು ಹಾಕಿದರು, ನೀರು ಒಳಗೆ ಹೊಗಲಿಲ್ಲ ಆಗಲೇ ಉಸಿರು ನಿಂತು ಹೋಗಿತ್ತು, ದೇಹ ತಣ್ಣಗಾಗಿತ್ತು.

ಚಟವೂ ಗೆದ್ದಿತ್ತು, ದೇವರೂ ಗೆದ್ದಿತ್ತು ಆದರೆ ಸೋತು ಮಲಗಿತ್ತು ರಾಜುವಿನ ದೇಹ. ಶವಪರಿಕ್ಷೆಯಲ್ಲಿ ವೈದ್ಯಾಧಿಕಾರಿಗಳು ಶರಾ ಬರೆದಿದ್ದರು " ರಾಜು ಮನಸ್ಸಿನ ತುಮುಲದಿಂದ ನಿಯಂತ್ರಣ ತಪ್ಪಿ ತಾನಾಗಿ ಲಾರಿ ಕೆಳಗೆ ಬಿದ್ದಿದ್ದಾನೆ" ಎಂದು. ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.......................(ಆತ್ಮೀಯರ  ಒತ್ತಾಯದ ಮೇರೆಗೆ ನಾನು ಬರೆಯಲು ಪ್ರಯತ್ನಿಸಿದ ಮೊದಲ ಕಥೆ. ತಪ್ಪಿದ್ದರೆ ತಿದ್ದಿ ಓದಿಕೋಳ್ಳಿ.
ನಿಮ್ಮ ಸಲಹೆ, ಸೂಚನೆ ಮತ್ತು ನಿಮ್ಮ ಅಭಿಪ್ರಾಯಗಳ ನೀರಿಕ್ಷೆಯಲ್ಲಿ)


16 ಕಾಮೆಂಟ್‌ಗಳು:

dileephs ಹೇಳಿದರು...

ಲಕ್ಷ್ಮಣ್ ಬಿರಾದರ್ ರವರೆ..
ಮೊದಲ ಪ್ರಯತ್ನ ಅಂತ ನಂಬಲು ಸಾಧ್ಯವಿಲ್ಲ.. ಕತೆ ತುಂಬಾ ಚೆನ್ನಾಗಿದೆ...

ನಮ್ಮ ದೇಶದಲ್ಲಿ ದೇವರ ಸೃಷ್ಟಿ ಹೇಗೆಲ್ಲಾ ಆಗುತ್ತದೆ ನೋಡಿ... ಅವನೇ ಸೃಷ್ಟಿಸಿದ ದೇವರು ಕೊನೆಯಲ್ಲಿ ರಾಜೂನ ಕೈ ಹಿಡೀಲಿಲ್ಲ... ಚಟ ಸೋತರೆ ದೇವರ ಗೆಲುವು.. ದೇವರು ಸೋತರೆ ಚಟದ ಗೆಲುವು... ರಾಜೂನೆ ಸೋತು ಇಬ್ಬರನ್ನೂ ಗೆಲ್ಲಿಸಿಬಿಟ್ಟ..!! ತುಂಬಾ ಇಷ್ಟವಾಯ್ತು ಕತೆ... ಇಂತಹ ಕತೆಗಳು ಇನ್ನಷ್ಟು ಬರಲಿ,....
ಧನ್ಯವಾದಗಳು...

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

ದಿಲೀಪ ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಮೋದಲ ಪ್ರತಿಕ್ರಿಯೆ ಬರೆದಿದ್ದಕ್ಕೆ ಧನ್ಯವಾದಗಳು. ಇನ್ನಸ್ತು ಬರೆಯಲು ಪ್ರಯತ್ನಿಸುತ್ತೆನೆ

ಮನಸು ಹೇಳಿದರು...

ಲಕ್ಷ್ಮಣ್ ಸರ್,
ನಿಜಕ್ಕೂ ಚೆನ್ನಾಗಿದೆ ಬರವಣಿಗೆ ಶೈಲಿ, ನಿಮ್ಮ ಕಥೆಯಲ್ಲಿ ರಾಜುವನ್ನು ಸೋಲಿಸಿದಿರಿ.. ತುಂಬಾಚೆನ್ನಾಗಿದೆ ನಿಮ್ಮ ಮೂದಲ ಪ್ರಯತ್ನ ಬಲು ಯಶಸ್ವಿಯಾಗಿದೆ.. ಮುಂದುವರಿಸಿ..ಹೀಗೆ ಹತ್ತು ಹಲವು ಕಥೆಗಳು ಬರಲಿ..
ಚಟದ ಗುಂಗು ಎಲ್ಲಿಗೆಳೆದುಕೊಂಡೋಗುವುದು ಎಂದೆನಿಸುತ್ತೆ....
ಧನ್ಯವಾದಗಳು

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಲಕ್ಷ್ಮಣ್ ಅವರೆ...


ಬಹಳ ಪಳಗಿದ ಕಥೆಗಾರರಂತೆ ಬರೆದಿದ್ದೀರಿ...
ಚಟ ಮತ್ತು ದೇವರ ಬಗ್ಗೆ ಸೊಗಸಾಗಿದೆ...

" ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.."
ಇಷ್ಟವಾಯಿತು


ಅಭಿನಂದನೆಗಳು..
ಒಂದು ಚಂದದ ಕಥೆಗೆ...

nivedita ಹೇಳಿದರು...

ಲಕ್ಷ್ಮಣ್ ಅವರೇ , ತುಂಬಾ ಮಾರ್ಮಿಕವಾಗಿದೆ. ಮೊದಲ ಪ್ರಯತ್ನ ಎಂದು ಅನ್ನಿಸುವದೆ ಇಲ್ಲ. ದೇವರು ಕೂಡ ತನ್ನ ಮೇಲೆ ಅಪವಾದವನ್ನು ತೆಗೆದುಕೊಂಡಿಲ್ಲ ಅನ್ನೋ ಮಾತು ನಗು ತರಿಸೋದಲ್ಲದೆ, ಕಹಿ ಸತ್ಯ ವನ್ನು ಎಷ್ಟು ಸರಳವಾಗಿ ಹೇಳಿದ್ದಿರಲ್ಲ ಎಂದು ಅನ್ನಿಸುತ್ತದೆ.

ಶಿವಪ್ರಕಾಶ್ ಹೇಳಿದರು...

ಲಕ್ಷ್ಮಣ್ ಅವರೇ,
ನಿಮ್ಮ ಬರವಣಿಗೆಯ ಶೈಲಿ ತುಂಬಾ ಚನ್ನಾಗಿದೆ.
ದೇವರು ಮತ್ತು ಚಟ ಇಷ್ಟವಾಯಿತು.
ಹೀಗೆ ಬರಿಯುತ್ತಿರಿ..

ದಿನಕರ ಮೊಗೇರ ಹೇಳಿದರು...

tumbaa cennagide.... prayatna munduvaresi....

ತೇಜಸ್ವಿನಿ ಹೆಗಡೆ- ಹೇಳಿದರು...

ಅರ್ಥವತ್ತಾಗಿದೆ ಕಥೆ. ಚಿಕ್ಕದಾದರೂ ಚೊಕ್ಕವಾಗಿದೆ. ನಿರೂಪಣಾ ಶೈಲಿ, ಕಥೆಯ ಕೊನೆ ಇಷ್ಟವಾಯಿತು. ಪ್ರಯತ್ನ ಮುಂದುವರಿಯಲಿ.

ವಿನುತ ಹೇಳಿದರು...

ಕಲ್ಲು ದೇವರಾದ ಭಾಗ, ಶಿವರಾಜ್ ಕುಮಾರ್ ಅಭಿನಯದ "ಶಿವಸೈನ್ಯ" ಚಿತ್ರದಲ್ಲಿ ನೋಡಿದ ನೆನಪು...
ಚಿಕ್ಕದಾದ, ಚೊಕ್ಕದಾದ ಹಾಗೂ ಒ೦ದು ಸ೦ದೇಶವುಳ್ಳ ಕತೆ. ಶೈಲಿ, ಹಾಗು ಅ೦ತ್ಯ ಚೆನ್ನಾಗಿದೆ.

LAxman ಹೇಳಿದರು...

@ಮನಸುರವರೆ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು
ನೀವು ಹೇಳಿದ್ದು ನಿಜ ಚಟ ಮನುಷ್ಯನನ್ನು
ಎಲ್ಲಿಗೆ ಬೇಕಾದರು ಎಳೆದುಕೊಂಡು ಹೋಗುತ್ತೆ,
ನಮಗೆ ಬೇಡವೆಂದರೂ ಆಷ್ಟು ಸರಳವಾಗಿ ಬಿಡಲ್ಲ

@ಪ್ರಕಾಶ ಸರ್,
" ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.."
ಇದೇ ಸಾಲನ್ನು ಮುಂದಿಟ್ಟುಕೊಂಡು ಕಥೆ ಬರೆದಿದ್ದು.

@ನಿವೇದಿತಾ ರವರೆ
ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಪ್ರತಿಕ್ರಿಯೆ ಬರೆದಿದ್ದಕ್ಕೆ ಧನ್ಯವಾದಗಳು.
ಆ ಸಾಲನ್ನು ನಾನು ತುಂಬಾ ಅನುಭವದಿಂದ ಬರೆದಿದ್ದು
ಇದರ ಬಗ್ಗೆ ಮುಂದೆ ಬರೆಯುವೆ
@ ಶಿವಪ್ರಕಾಶ್ ರವರೆ
ನೀವೆಲ್ಲ ಬಂದು ಓದಿ ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು. ಬರೆಯಲು ಪ್ರಯತ್ನಿಸುತ್ತ್ನೇನೆ
@ ದಿನಕರ ಮೊಗೇರ
. ನನ್ನ ಬ್ಲಾಗಿಗೆ ಬೇಟಿಗೆ ಧನ್ಯವಾದಗಳು
@ತೇಜಸ್ವಿನಿ ಮೆಡಮ್
ಎಲ್ಲರೂ ಬರೆಯುವದನ್ನು ನೋಡಿ ನನಗೂ ಬರೆಯಬೇಕು ಅಂತ ಅನಿಸಿತು
ಅದಕ್ಕೆ ಒಂದು ಚಿಕ್ಕ ಪ್ರಯತ್ನ ಅಷ್ಟೆ.
ನಾನು ಮತ್ತು ಲೇಖನಗಳು ನಾನೋಂದು ತೀರ ಅವುಗಳು ಒಂದು ತೀರ
ಸೇತುವೆ ಕಟ್ಟುವ ಯೋಚನೆ ಮಾತ್ರ. ............
@ವಿನುತ
ನಿಮ್ಮಂತೆ ದೊಡ್ಡ ಲೇಖನಗಳನ್ನು ಬರೆಯಲು ನನಗೆ ಅಸಾದ್ಯದ ಮಾತು.
ನನ್ನ ಬ್ಲಾಗಿಗೆ ಬೇಟಿ ಕೊಟ್ಟು ಪ್ರತಿಕ್ರಿಯೆ ಬರೆದಿದ್ದಕ್ಕೆ ಧನ್ಯವಾದಗಳು

ಗೌತಮ್ ಹೆಗಡೆ ಹೇಳಿದರು...

:)

shivu ಹೇಳಿದರು...

ಲಕ್ಷ್ಮಣ್ ಸರ್,

ಕೆಲಸದ ಒತ್ತಡದಲ್ಲಿ ನಿಮ್ಮ ಕತೆಯನ್ನು ತಡವಾಗಿ ಓದಿದೆ.

ಚಟ, ದೇವರು, ಮನುಷ್ಯ ಮೂರು ವಿಚಾರಗಳನ್ನು ಬಳಸಿಕೊಂಡು ಸೊಗಸಾದ ಪುಟ್ಟ ಕತೆಯನ್ನು ಬರೆದಿದ್ದೀರಿ..
ದೇವರು ಗೆದ್ದಿತಾ, ಚಟ ಗೆದ್ದಿತಾ ಎನ್ನುವುದಕ್ಕಿಂತ ರಾಜು ಎನ್ನುವವನು ಬದುಕಿನಲ್ಲಿ ಗೆಲ್ಲಲಾಗಲಿಲ್ಲವೆನ್ನುವುದು ನನಗನ್ನಿಸಿದ್ದು.
ಮತ್ತಷ್ಟು ಹೊಸವಿಚಾರಗಳನ್ನು ಆರಿಸಿಕೊಳ್ಳಿ. ಸಾಧ್ಯವಾದರೆ ನಿರೂಪಣೆಯ ಶೈಲಿಯನ್ನು ಬದಲಾಯಿಸುತ್ತಾ ಬರೆಯಿರಿ..
ಧನ್ಯವಾದಗಳು.

Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Rajesh Manjunath - ರಾಜೇಶ್ ಮಂಜುನಾಥ್ ಹೇಳಿದರು...

ಹಿರಿಯ ಗೆಳೆಯ ಲಕ್ಷ್ಮಣ್,

ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ಮೊದಲ ಪ್ರಯತ್ನದ ಕಥೆ ಚೆನ್ನಾಗಿಯೇ ಇದೆ. ಕೆಲವೆಡೆ ಕಾಗುಣಿತದ ತಪ್ಪುಗಳನ್ನು ಬಿಟ್ಟರೆ ಕಥೆ ನೈಜವಾಗಿದೆ. ಅಕ್ಷರ ಕೀಲಿಸುವಾಗು ಸ್ವಲ್ಪ ಗಮನವಿರಲಿ, ಇದನ್ನು ಹೊರತು ಪಡಿಸಿದರೆ, ಕಥೆಯ ಹರಿವು ಓದಿಸಿಕೊಂಡು ಹೋಗುತ್ತದೆ.

ಶುಭವಾಗಲಿ....

ಶಾಂತಲಾ ಭಂಡಿ ಹೇಳಿದರು...

ಲಕ್ಷ್ಮಣ್ ಅವರೆ...
ಕಥಾ ವಸ್ತು ಇಷ್ಟವಾಯಿತು. ಕಥೆ ಬರೆಯಬೇಕೆಂಬ ಒತ್ತಾಸೆಯ ತುಡಿತ ಕಥೆಯ ಸಾಲುಗಳನ್ನು ಬಳಸಿ ನಿಂತಿದೆ.
ಕಥೆಗಾಗಿ ಧನ್ಯವಾದ. ಬರೆಯುತ್ತಿರಿ.

ಶಿವಶಂಕರ ವಿಷ್ಣು ಯಳವತ್ತಿ ಹೇಳಿದರು...

@ಲಕ್ಷ್ಮಣ್ ಸರ್.

ನಮ್ಮನ್ನೂ ನಿಮ್ಮ ಆತ್ಮೀಯರೆಂಬಂತೆ ಪರಿಗಣಿಸಿ. ಇದೇ ಥರ ಉತ್ತಮವಾದ ಕಥೆಗಳನ್ನು ನೀಡುತ್ತಿರಿ. ತುಂಬಾ ಚನ್ನಾಗಿದೆ. ಈ ಕಥೆ ಹೊಳೆದಿದ್ದರೆ, ಒಂದೆರಡು ಸಾಲಿನ ಕಥೆಗಳಿಗೆ ಸೇರಿಸಿಬಿಡ್ತಿದ್ದೆ..

-ಯಳವತ್ತಿ