ಸೋಮವಾರ, ಫೆಬ್ರವರಿ 14, 2011

"Happy Valentine's Day

ಪ್ರೇಮಿಗಳ ದಿನಾಚರಣೆಯ ದಿನ ಒಂದು ಪ್ರಸಂಗ :

             ಬೆಳಗಿನ ಜಾವ ಎಂದಿನಂತೆ  ವಾಕಿಂಗ್ ಮುಗಿಸಿ ಮನೆಗೆ ಬರುತಿದ್ದೆ, ಸಮಯ ೭ ಘಂಟೆ  ಮನೆಯ ಬಸ್ ನಿಲ್ದಾಣದ ಹತ್ತಿರ  ರಸ್ತೆಯ ಪಕ್ಕದಲ್ಲಿ  ಒಂದು ಹುಡುಗ ಬೈಕ್ ನಿಲ್ಲಿಸಿ ಹುಡುಗಿ ಜೊತೆ ಮಾತಾಡ್ತಾ ನಿಂತಿದ್ದ. ಅವಳು ಬಸ್ಸಿನಲ್ಲಿ ಹೋಗಲು ಬಸ್ ನಿಲ್ದಾಣಕ್ಕೆ ಬರುವವಳಿರಬೇಕು ಅವನು ಇದೆ ಸರಿಯಾದ ಜಾಗ ಮತ್ತು ಸಮಯ ಎಂದು ತಿಳಿದು ಅವಳನ್ನು ಭೇಟಿಯಾಗಿದ್ದ. ಅವರ ಪಕ್ಕ ಹೋಗುವಾಗ ಅವರ ಮಾತುಕತೆ ನನ್ನ ಕಿವಿಗೆ  ಬಿತ್ತು .ನನಗೆ ಇವತ್ತು ಪ್ರೇಮಿಗಳ ದಿನಾಚಾರಣೆ ನೆನಪಾಯಿತು ಕೂತುಹಲದಿಂದ ನಾನು ಸ್ವಲ್ಪ ಅವರ ಮಾತನ್ನ ಆಲಿಸಿದೆ(ತಪ್ಪು ಅಂತ ಗೊತ್ತಿದ್ದು). 
ಅವಳು ಬೇಡ ಇದನ್ನು ನೋಡಿದರೆ ನಮ್ಮ ಅಮ್ಮ ಬೈತಾರೆ ಅಂತಿದ್ಲು . ಅವನು ಏನು ಆಗಲ್ಲಾ  ಕ್ಯಾರಿ ಬ್ಯಾಗ ತೆಗೆದು ನೋಡು ಅಂತಿದ್ದಾ.  ಕೋನೆಗೆ ಅವಳು ಒಪ್ಪಿ ಕ್ಯಾರಿ ಬ್ಯಾಗ ತೆಗೆದು ಕೊಂಡು ತೆರೆದು ನೋಡಿದಳು ಅದರಲ್ಲಿ ಒಂದು ಕೆಂಪು ಗುಲಾಬಿ ಮತ್ತು ಚೇಂದನೆಯ ಗಿಫ್ಟ್ಟ್ ಬಾಕ್ಸ್ ಇತ್ತು.  ಅವಳು ಗಿಫ್ಟ್ ಬಾಕ್ಸ್ ತೆರೆದಾಗ ಅದರಲ್ಲಿ ಚಿಕ್ಕದಾದ ಉಡುಗೋರೆ ಇತ್ತು (ಬಹುಶ: ಜಾಸ್ತಿ ಬೆಲೆಯ ಉಂಗುರ ಇರಬೇಕು)  ಅವನು ಅವಳ ಕಿವಿಯ ಹತ್ತಿರ ಎನೋ ಪಿಸುಮಾತನಾಡಿ  ಎನೋ ಸಾಧಿಸಿದ ಹುಮ್ಮಸ್ಸಿನಲ್ಲಿ ಬೈಕ ಜೋರಾಗಿ ಓಡಿಸಿಕೊಂಡು ಹೋದ. ಅತ್ತ ಅವನು ಹೋದ ತಕ್ಷಣ ಅವಳು ಜೋರಾಗಿ ತು... ಅಂತ ಉಗಳಿ ಗುಲಾಬಿಯನ್ನು ರಸ್ತೆ ಬದಿಗೆ ಎಸೆದು ಉಡುಗೋರೆಯನ್ನು ವ್ಯಾನಿಟಿ ಬ್ಯಾಗಿಗೆ ಸೇರಿಸಿ ಬಸ ಹತ್ತಿದಳು. ನಾನು ಕಾಕಾ ಅಂಗಡಿಯ ಕಾಫಿ ಕುಡಿದು ಬರುವಾಗ ಅವಳು ಎಸೆದ ಆ ಗುಲಾಬಿಯನ್ನು ನೋಡಿದಾಗ ಅದು ನನಗೆ ಹೇಳಿದ ಹಾಗಿತ್ತು :  "Happy Valentine's Day

ಬುಧವಾರ, ಅಕ್ಟೋಬರ್ 7, 2009

ಇದು ಕಥೆಯಲ್ಲ ....... ನೈಜ ಘಟನೆ......

             ಇದು ನಡೆದಿದ್ದು ೯೦ ರ ದಶಕದ ಉತ್ತಾರಾರ್ಧದಲ್ಲಿ, ನಾನಾಗ ಇಂಜನಿಯರಿಂಗ್ ಪದವಿ  ಪರೀಕ್ಷೆ ಮುಗಿಸಿ ಬಿಜಾಪುರ ಹತ್ತಿರವಿರುವ ನಂದಿ ಶುಗರ್ಸ್ ನಲ್ಲಿ ಕಂಪ್ಯೂಟರ್ ಪ್ರೋಗ್ರಾಮರ್ ಅಂತ ಕೆಲಸಕ್ಕೆ ಹೋಗ್ತಾ ಇದ್ದೆ. ನನ್ನ ಊರು(ಹೊಸುರ) ಅಲ್ಲಿಯೇ ಸಮೀಪ ಇರುವದರಿಂದ ಊರಿನಿಂದ ಹೋಗಿ ಬಂದು ಮಾಡ್ತಾ ಇದ್ದೆ. 
                        ಒಂದು ದಿನ ಕೆಲಸ ಬಹಳ ಇದ್ದುದರಿಂದ ರಾತ್ರಿ ಎರಡು ಘಂಟೆಯವರೆಗೆ ಇದ್ದೆ. ನಂತರ ಊರಿಗೆ ಹೋಗುವ ವಿಚಾರ ಮಾಡಿದೆ ಯಾಕೆಂದರೆ ಅಲ್ಲಿ ಮಲಗಲು ವ್ಯವಸ್ಥೆ ಇರಲಿಲ್ಲ  ಮತ್ತು ಅಲ್ಲಿಯೇ ಇದ್ದರೆ ಬೇಗನೆ ಏಳಬೇಕಾಗುತಿತ್ತು ಊರಿಗೆ ಹೋದರೆ ನಿರಾಳವಾಗಿ ಮಲಗಬಹುದು ಎಂದು ಹೋಗಲು ಸಿಧ್ದವಾದೆ. ಆದರೆ ಊರು ಅಲ್ಲಿಂದ ನಾಲ್ಕು ಕಿ.ಮಿ. ದೂರ ಇತ್ತು. ಆಗ ಕಬ್ಬು ತಂದಿದ್ದ ಟ್ಯಾಕ್ಟರ ಚಾಲಕನೋಬ್ಬ " ಸರ್ ನಿಮ್ಮನ್ನು ಕ್ರಾಸ್ ವರೆಗೆ ಟ್ಯಾಕ್ಟರನಲ್ಲಿ ಬಿಡುತ್ತೇನೆ ಅಲ್ಲಿಂದ ನೀವು ಹೋಗಬಹುದು " ಅಂದ. ಹುಣ್ಣಿಮೆ ಹತ್ತಿರ ಇತ್ತು ಅಂತ ಕಾಣುತ್ತೆ ಅಂದು ಬೆಳದಿಂಗಳ ರಾತ್ರಿ ಇತ್ತು ಅಲ್ಲಿಂದ ಎರಡು ಕಿ.ಮಿ ದೂರ ಹೋಗಬಹುದು ಎಂದು ತಿರ್ಮಾನಿಸಿ ಹೋರಟೆ.
            ನನ್ನನ್ನು ಕ್ರಾಸ್ ನಲ್ಲಿ ಇಳಿಸಿ ಅವನು ಹೋರಟು ಹೋದ. ನಾನು ಊರಿನತ್ತ ಮುಖ ಮಾಡಿ ನಡೆಯುತ್ತಿದ್ದೆ, ಸುತ್ತಲು ಖಾಲಿ ಹೋಲಗಳು, ದೂರದಲ್ಲಿದ್ದ ಬೀದಿ ದೀಪಗಳು ಕಾಣುತಿದ್ದವು ಹಾಗೂ ನಾಯಿಗಳ ಬೋಗುಳುವಿಕೆ ಕೇಳಿಸುತ್ತಿತ್ತು. ಬೇಡವೆಂದರೂ ಮನಸ್ಸಿನಲ್ಲಿ ದೆವ್ವ, ಭೂತಗಳ ವಿಚಾರ ಸುಳಿಯತೊಡಗಿತು.  ದಾರಿಯಲ್ಲಿದ್ದ  ಕರಿಯಮ್ಮನ ದೇವಸ್ಥಾನದ ಹತ್ತಿರ ಬನ್ನಿ ಗಿಡದಲ್ಲಿ ಹೆಣ್ಣುಮಗಳೊಬ್ಬಳು ನೇಣು ಹಾಕಿಕೊಂಡಿದ್ದಳು ಅಂತ ಯಾರೋ ಹೇಳಿದ್ದ ನೆನಪಾಯಿತು. ದೆವ್ವಗಳು ಬೇರೆ ಬೇರೆ ರೂಪ ತಾಳುತ್ತವೆ, ನಾಯಿಯಾಗಿ ಹಿಂಬಾಲಿಸುತ್ತವೆ,ಮುದುಕಿಯಾಗಿ ನಿಲ್ಲುತ್ತವೆ ಅಂತ ಕೇಳಿದ್ದೆ. ಅದಕ್ಕೆ ರಾತ್ರಿ ಹೊತ್ತು ನೀರು ಅಥವಾ ಬೆಂಕಿ ಇರಬೇಕೆನ್ನುತ್ತಿದ್ದರು. ನಾನು ಇವೆಲ್ಲವನ್ನು ನಂಬುತ್ತಿರಲಿಲ್ಲ ಆದರೂ ಕೂಡ ಬೇಡ ಬೇಡವೆಂದರೂ ನೆನಪಾಗತೊಡಗಿತು.
           ಹೀಗೆ ಯೋಚಿಸುತ್ತಾ ಸಾಗುತ್ತಿರುವಾಗ ದೂರದಲ್ಲಿ ಆ ಗಿಡದ ಹತ್ತಿರ ರಸ್ತೆಯಲ್ಲಿ ಒಂದು ಆಕೃತಿ ಗೋಚರಿಸತೋಡಗಿತು.  ಏನೋ ಗಿಡ ಅಥವಾ ಪೊದೆ ಇರಬೇಕೆಂದು ನೋಡಿದಾಗ ಯಾರೋ ಮನುಷ್ಯರು ಬರುತ್ತಿದ್ದಾರೆ ಅನ್ನಿಸಿತು, ರಾತ್ರಿ ಹೋತ್ತು ೨ ಘಂ. ಯಾರಿರಬಹುದು ಹೊಲಕ್ಕೆ ಹೋರಟ ರೈತರಿರಬೇಕೆಂದು  ಭಾವಿಸಿ ದಿಟ್ಟಿಸಿದಾಗ ಅಲ್ಲಿ ಸ್ವಲ್ಪ ಬಿಳಿ ಸೀರೆಯುಟ್ಟ ಹೆಣ್ಣುಮಗಳು ಇದ್ದಳು..............  
                ಸಣ್ಣಗೆ ಮೈಯಲ್ಲಿ ನಡುಕ ಶುರುವಾಯಿತು, ಗಂಟಲು ಒಣಗಲು ಪ್ರಾರಂಭಿಸಿತು, ಅವಳು ನನ್ನ ಕಡೆಗೆ ಬರುತ್ತಿದ್ದಳು. ನನಗೆ ಏನು ತೊಚುತ್ತಿಲ್ಲ  ಹಿಂದೆ ನೋಡಿದೆ ಅದಾಗಲೇ ಅರ್ಧ ದಾರಿ ಬಂದಾಗಿತ್ತು, ಓಡಿ ವಾಪಸ ಹೋಗಬೇಕು ಅಂದರೆ ಎಲ್ಲಿ ಅಂತ, ಎಷ್ಟು ದೂರ ಅಂತ ಹೋಗುವದು, ಕೂಗಬೇಕೆಂದರೆ ಯಾರು ಕೇಳುವರು ನನ್ನ ಕೂಗು.  ತಂದೆ,ತಾಯಿ,ತಂಗಿ,ಗೆಳೆಯರು ಮತ್ತು ಎಲ್ಲರೂ ಒಂದು ಕ್ಷಣ ನೆನಪಾದರು. ಮುಂದೆ ನೋಡಿದೆ ಅವಳು ಮತ್ತಷ್ಟು ಹತ್ತಿರ ಬರುತ್ತಿದ್ದಳು ಮೈಯಲ್ಲಾ ಬೆವರಲು ಪ್ರಾರಂಭಿಸಿತು.  ಬೇರೆ ದಾರಿಯಿರಲಿಲ್ಲ ಬಂದು ತಪ್ಪು ಮಾಡಿದೆ ಅನಿಸಿತು, ಜೀವದ ಆಸೆ ಬಿಟ್ಟು ಮುಂದೆ ನಡೆಯತೊಡಗಿದೆ. ಅವಳು ದಾರಿಯ ಆ ಪಕ್ಕ ನಡೆಯುತ್ತಿದ್ದಳು ನಾನು ಈ ಪಕ್ಕಕ್ಕೆ ನಡೆಯತೊಡಗಿದೆ. ತೀರ ಸಮೀಪ ಬಂದಳು ನನಗೆ ದೈರ್ಯ ಸಾಲಲಿಲ್ಲ ಕಣ್ಣು ಮುಚ್ಚಿದೆ. ಹಾಗೆ ನಡೆದೆ ಸ್ವಲ್ಪ ಕಣ್ಣು ಬಿಟ್ಟು ನೋಡಿದಾಗ ಅವಳು ಪಕ್ಕದಲ್ಲಿ ದಾಟಿ ಮುಂದೆ ಸಾಗಿದಳು ನಾನೂ ಉಸಿರು ಬಿಗಿ ಹಿಡಿದು ಮುಂದೆ ಸಾಗಿದೆ.   ದೆವ್ವಕ್ಕೆ ಕಾಲು(ಪಾದ) ತಿರುಗಿರುತ್ತವೆ ಮತ್ತು ಸ್ವಲ್ಪ ಸಮಯದ ನಂತರ ದೆವ್ವ ಮಾಯವಾಗುತ್ತವೆ ಅಂತ ಕೇಳಿಪಟ್ಟಿದ್ದರಿಂದ ಕೂತುಹಲದಿಂದ ಮೊಂಡು ಧೈರ್ಯ ಮಾಡಿ ಹಿಂತಿರುಗಿ ನೋಡಿದೆ.  ಅವಳ ಪಾದ ಕಾಣಲಿಲ್ಲ ಅವಳೂ ಮಾಯವಾಗಿರಲಿಲ್ಲ ತನ್ನ ಪಾಡಿಗೆ ತಾನೆಂಬಂತೆ ಹೋಗ್ತಾ ಇದ್ದಳು. ನಾನೂ ಊರ ಕಡೆಗೆ ಸನ್ನಿ ಹಿಡಿದಂತೆ ಬಿರುನಡಿಗೆಯಲ್ಲಿ ನಡೆದೆ.
               ಊರ ಶಾಲೆಯ ಹತ್ತಿರ ಬಂದೆ ಬೀದಿ ದೀಪ ಬೇಳಗುತಿತ್ತು "ಬದುಕಿದೆಯಾ ಬಡಜೀವವೆ ಅಂತ" ಮನಸ್ಸಿನಲ್ಲಿ ಅಂದು ಕೋಳ್ಳುತ್ತಿದ್ದಾಗ, ಸೈಕಲಿನಲ್ಲಿ ನಮ್ಮ ಊರಿನವನೇ ಆದ ಹೊಲದಲ್ಲಿ ಕೇಲಸಕ್ಕೆ ಬರುವ ರಾಮ (ಬಹುಶ ರಾಮ ಇರಬಹುದು,ಹೆಸರು ನೆನಪಿಲ್ಲ)  ಎದುರಿಗೆ  ಬಂದ, ಅವನ ಮುಖದಲ್ಲಿ ಗಾಬರಿಯಿತ್ತು. ಬೇಳಕಿನಲ್ಲಿ ನನ್ನ ಗುರುತು ಹಿಡಿದು ಪ್ಯಾಕ್ಟರಿಯಿಂದ ಈಗ ಬಂದ್ರಾ ಗೌಡ್ರೆ ಅಂತ ಕೇಳಿದ. ನಾನು ಹೌದು ಅಂದೆ. ನನ್ನ ಮಗಳು ಮನೆಯಲ್ಲಿ ಜಗಳವಾಡಿ ಹೋಗಿದ್ದಾಳೆ ದಾರಿಯಲ್ಲಿ ನಿಮಗೆ ಭೇಟಿ ಆದಳಾ ಅಂತಾ ಕೇಳಿದ.   ಹಾ...... ಅಂತ ನಿಟ್ಟುಸಿರು ಬಿಟ್ಟೆ. ಸಿಟ್ಟು ಮತ್ತು ಅವಳ ಬಗ್ಗೆ ಕನಿಕರ ಒಮ್ಮೇಲೆ ಬಂತು.  "ಹೋದಳು ನೋಡು ಮಾರಾಯಾ" ಅಂತ ನಿರಾಳವಾಗಿ ಉಸಿರಾಡಿದೆ.........  ಆವನು ಸೈಕಲ ಹತ್ತಿ ಆ ಕಡೆಗೆ ಹೋದ...........     
   


(ಇದು ನನ್ನ ಜೀವನದಲ್ಲಿ ನಡೆದ ಸತ್ಯ ಘಟನೆ. ನಿಮ್ಮೇಲ್ಲರ ಜೊತೆ ಹಂಚಿಕೊಳ್ಳಬೇಕೆನಿಸಿತು ಅದಕ್ಕೆ ಬರೆಯುತ್ತಿದ್ದೆನೆ. 
ಬರಹದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ದಾಖಲಿಸಿ. ಹಾಗೂ ಎಲ್ಲ ಆತ್ಮಿಯರಿಗೂ ಬ್ಲಾಗಿಗೆ ಭೆಟ್ಟಿ ಕೊಡಲು ತಿಳಿಸಿ)   

ಭಾನುವಾರ, ಅಕ್ಟೋಬರ್ 4, 2009

ದೇವರು ಮತ್ತು ಚಟ




ಅಮಾವಾಸ್ಯೆಯ ದಿನ ಮಧ್ಹಾಹ್ನ 11.ಘಂ ಬಿಸಿಲು ಜಾಸ್ತಿಯಾಗುತ್ತಿತ್ತು, ರಾಜು ಕುಂಕುಮ,ಉದಬತ್ತಿ,ಕಡ್ಡಿಪಟ್ಟಣ ಮತ್ತು ನೈವೇದ್ಯ ತೆಗೆದುಕೊಂಡು ಅಮ್ಮ ಹೇಳಿದಂತೆ ಹೋಲದಲ್ಲಿರುವ ಪಂಪಸೆಟ್‍ಗೆ ಪೂಜೆ ಮಾಡಲು ಹೊರಟಿದ್ದ. ಹೋಗುವಾಗ ದಾರಿಯಲ್ಲಿ ಯಾರೋ ಸೇದಿ ಬಿಸಾಕಿದ್ದ ಸಿಗರೇಟಿನ ತುಂಡು ಬಿದ್ದಿತ್ತು, ಅದನ್ನು ನೋಡಿದ ತಕ್ಷಣ ಅವನಿಗೆ ಗೌಡರು ಸುರುಳಿ ಸುರಳಿಯಾಗಿ ಹೊಗೆ ಬಿಡುವ ದೃಶ್ಯ ಕಣ್ಮುಂದೆ ಬಂದಿತು. ಸುತ್ತಮುತ್ತ ನೋಡಿದ ಯಾರು ಕಾಣಲಿಲ್ಲ ನಿಧಾನವಾಗಿ ಕೈಯಲ್ಲಿ ತೆಗೆದುಕೊಂಡು ಮರದಬುಡದಲ್ಲಿರುವ ಕಲ್ಲಿನ ಮೇಲೆ ಕುಳಿತು ಸಿಗರೇಟಗೆ ಬೆಂಕಿ ಹಚ್ಚಿದ. ಸಾವಕಾಶವಾಗಿ ಹೊಗೆಯನ್ನು ಒಳಗೆ ಎಳೆದುಕೊಂಡು ಬಿಟ್ಟ ಮಜಾ ಅನಿಸಿತು. ಮತ್ತೋಮ್ಮೆ ಹೊಗೆಯನ್ನು ಎಳೆದ, ತಕ್ಷಣ ಹೊಗೆ ಗಂಟಲಲ್ಲಿ ಸಿಕ್ಕು ಕೆಮ್ಮಿದ ರಭಸಕ್ಕೆ ಕೈಯಲ್ಲಿರುವ ಕುಂಕುಮ,  ನೈವೇದ್ಯ ಎಲ್ಲ ಕಲ್ಲಿನ ಮೇಲೆ ಚೆಲ್ಲಿಹೋಯಿತು. ಯಾರೋ ಆ ದಾರಿಯಲ್ಲಿ ಬರ್ತಾ ಇದ್ದರು ಅವರನ್ನು ನೋಡಿ ಎಲ್ಲವನ್ನು ಅಲ್ಲಿಯೇ ಬಿಟ್ಟು ಮನೆಕಡೆಗೆ ಹೋಗಿಬಿಟ್ಟ ರಾಜು.
           ದಾರಿಯಲ್ಲಿ ಬರುತ್ತಿದ್ದ ಮದ್ಯವಯಸ್ಕರೊಬ್ಬರು ಒಂದು ಸಮಸ್ಯೆಯಲ್ಲಿ ಸಿಲುಕಿದ್ದರು. ಅದರ ಬಗ್ಗೆಯೆ ಬಿಸಿಲಿನಲ್ಲಿ ಬಳಲಿ ಚಿಂತಿಸುತ್ತಾ ಬರುತ್ತಿರುವಾಗ ದಾರಿಯಲ್ಲಿ ಕಂಡ ಗಿಡದ ನೆರಳಿನಲ್ಲಿ ವಿಶ್ರಮಿಸಲು ನಿಂತರು. ಅವರ ದೃಷ್ಟಿ ಕಲ್ಲಿನ ಮೇಲೆ ಹೊಯಿತು ಮುಳುಗುವವನಿಗೆ ಹುಲ್ಲು ಕಡ್ದಿ ಆಸರೆ ಎಂಬಂತೆ ಕುಂಕುಮ,ನೈವೇದ್ಯ ಬಿದ್ದ ಕಲ್ಲಿಗೆ ನಮಸ್ಕರಿಸಿ ತನ್ನ ಸಮಸ್ಯೆ ಬಗೆಹರಿಸಲು ಕೇಳಿಕೋಂಡ, ಸಂಕಷ್ಟ ದಲ್ಲಿರುವ ಮನುಷ್ಯನಿಗೆ ಕಲ್ಲು ಕೂಡ ದೇವರಂತೆ ಕಂಡಿರುವದು ಅತಿಶಯವೇನು ಅಲ್ಲ.

ಕಾಕತಾಳಿಯವೆಂಬಂತೆ ಮನೆಗೆ ಬರುವಷ್ಟರಲ್ಲಿಅವನ ಸಮಸ್ಯೆ ಬಗೆ ಹರಿದಿತ್ತು. ಆ ಯಜಮಾನನಿಗೆ ತಾನು ಗಿಡದ ಬುಡದಲ್ಲಿ ನಮಸ್ಕಕರಿಸಿದ ದೇವರೇ ನನ್ನ ಸಮಸ್ಯೆ ಬಗೆಹರಿಸಿದ ಎಂದು ತಿಳಿದು ಊರ ಜನರ ಮುಂದೆ ಹೇಳಿದ.


ಕಾಲಚಕ್ರ 20 ವರ್ಷ ಉರುಳಿತ್ತು, ರಾಜು ತರುಣನಾಗಿದ್ದ ಆದರೆ ಸಂಪೂರ್ಣ ಸಿಗರೇಟಿನ ಚಟದ ದಾಸನಾಗಿದ್ದ ಎರಡು ಘಂಟೆ ಕೂಡ ಅವನಿಂದ ಸಿಗರೇಟ ಬಿಡಲು ಆಗುತ್ತಿರಲಿಲ್ಲ ಚಟ ತನ್ನ ಹಟ ಸಾಧಿಸಿತ್ತು. ಇತ್ತ ಗಿಡದ ಬುಡದಲ್ಲಿ ಅಮ್ಮನವರ ದೇವಸ್ಥಾನ ತಲೆ ಎತ್ತಿ ನಿಂತಿತ್ತು ಅದೇ ಮಧ್ಯವಯಸ್ಕ ಅದರ ಪೂಜಾರಿ ಯಾಗಿದ್ದ. ಬೇಡಿದವರಿಗೆ ವರ ದಯಪಾಲಿಸುವ ಸತ್ವವುಳ್ಳ ದೇವತೆ ಆ ಅಮ್ಮ ಆಗಿದ್ದಳು.

ರಾಜುವಿಗೆ ತನ್ನ ಚಟದ ಬಗ್ಗೆ ಕೇಡುಕೆನಿಸಿ ಅದನ್ನು ಬಿಡಬೇಕೆಂದು ತಿರ್ಮಾನಿಸಿದರೂ ಅವನಿಂದ ಆಗುತ್ತಿರಲಿಲ್ಲ ಚಟವೇ ಗೆಲ್ಲುತಿತ್ತು. ಅವನಿಗೆ ಅಮ್ಮನ ದೇವಸ್ಥಾನದ ಮಹಿಮೆ ಬಗ್ಗೆ ಹೇಳಿದರು. ಅಮ್ಮನವರಿಗೆ ಹರಕೆ ಸಲ್ಲಿಸು ನಿನ್ನ ಚಟ ತಾನಾಗಿ ಬಿಟ್ತು ಹೊಗುತ್ತದೆ ಅಂದರು. ರಾಜು ತನ್ನ ಜೀವನದ ಕಡೆಯ ಸಿಗರೇಟ ಎಂದು ಅಂದುಕೊಳ್ಳುತ್ತಾ ಕೋನೆಯ ದಮ್ಮು ಹೋಡೆದು ತನ್ನ ಮೋಟಾರಸೈಕಲಿನಲ್ಲಿ ಅಮ್ಮನವರ ಗುಡಿಗೆ ಹೋರಟ ತೆಂಗಿನಕಾಯಿ ಒಡೆಸಿ, ಪೂಜೆ ಮಾಡಿಸಿ ನನ್ನ ಚಟ ಬಿಡಿಸೆಂದು ಕೇಳಿಕೊಂಡ. ದೇವರು ನನ್ನ ಹರಕೆ ಕೇಳುತ್ತಾಳೆ ಎಂದು ಬಲವಾಗಿ ನಂಬಿ ದೇವಸ್ಥಾನದಲ್ಲಿ 1 ಘಂಟೆ ಕಳೆದು ಇನ್ನುಮುಂದೆ ಸಿಗರೇಟ ಸೇದುವದಿಲ್ಲ ಎಂದು ತಿರ್ಮಾನಿಸಿ ಊರಕಡೆಗೆ ಹೊರಟ.

ಬೈಕಿನಲ್ಲಿ ಹಿಂತಿರುಗಿ ಬರುವಾಗ ಎರಡು ಘಂಟೆ ಆಗ್ತಾ ಇತ್ತು ದೇಹದಲ್ಲಿನ ನಿಕೋಟಿನ್ ಕಡಿಮೆಯಾಗಿ ಸಿಗರೇಟ ಸೇದುವ ಬಯಕೆ ಹೊತ್ತಿಕೊಂಡಿತ್ತು. ತಾನು ಅದಕ್ಕೆ ಸೋಲಬಾರದು ಸೋತರೆ ಚಟವೇ ಗೆದ್ದು ಬಿಡುತ್ತೆ, ದೇವರು ಸೋಲುತ್ತೆ, ಇಲ್ಲದಿದ್ದರೆ ದೇವರು ಗೆಲ್ಲುತ್ತೆ, ಚಟ ಸೋಲುತ್ತೆ. ಯಾವದು ಗೆಲ್ಲುತ್ತೆ ಎಂದು ಮನದಲ್ಲಿ ಅಂದು ಕೋಳ್ಳುತ್ತಾ ಮುಂದಿರುವ ಬಸ್ಸನ್ನು ಹಿಂದೆ ಹಾಕುವ ಭರದಲ್ಲಿ ಮುಂದೆ ಬರುವ ಲಾರಿಗೆ ಗುದ್ದಿ ಬಿಟ್ಟ. ತಲೆಗೆ ಏಟು ಬಿದ್ದಿತ್ತು ಬಸ್ಸಿನಲ್ಲಿಯ ಜನರು ಇಳಿದರು ತಮ್ಮ ಊರಿನ ರಾಜುವನ್ನು ಗುರುತಿಸಿದರು ಬಾಯಲ್ಲಿ ನೀರು ಹಾಕಿದರು, ನೀರು ಒಳಗೆ ಹೊಗಲಿಲ್ಲ ಆಗಲೇ ಉಸಿರು ನಿಂತು ಹೋಗಿತ್ತು, ದೇಹ ತಣ್ಣಗಾಗಿತ್ತು.

ಚಟವೂ ಗೆದ್ದಿತ್ತು, ದೇವರೂ ಗೆದ್ದಿತ್ತು ಆದರೆ ಸೋತು ಮಲಗಿತ್ತು ರಾಜುವಿನ ದೇಹ. ಶವಪರಿಕ್ಷೆಯಲ್ಲಿ ವೈದ್ಯಾಧಿಕಾರಿಗಳು ಶರಾ ಬರೆದಿದ್ದರು " ರಾಜು ಮನಸ್ಸಿನ ತುಮುಲದಿಂದ ನಿಯಂತ್ರಣ ತಪ್ಪಿ ತಾನಾಗಿ ಲಾರಿ ಕೆಳಗೆ ಬಿದ್ದಿದ್ದಾನೆ" ಎಂದು. ಯಾಕೆಂದರೆ ಚಟ ಮತ್ತು ದೇವರು ತನ್ನ ಮೇಲೆ ಅಪವಾದ ಹೋತ್ತು ಕೋಳ್ಳಲು ತಯಾರಿರಲಿಲ್ಲ.......................



(ಆತ್ಮೀಯರ  ಒತ್ತಾಯದ ಮೇರೆಗೆ ನಾನು ಬರೆಯಲು ಪ್ರಯತ್ನಿಸಿದ ಮೊದಲ ಕಥೆ. ತಪ್ಪಿದ್ದರೆ ತಿದ್ದಿ ಓದಿಕೋಳ್ಳಿ.
ನಿಮ್ಮ ಸಲಹೆ, ಸೂಚನೆ ಮತ್ತು ನಿಮ್ಮ ಅಭಿಪ್ರಾಯಗಳ ನೀರಿಕ್ಷೆಯಲ್ಲಿ)


ಶನಿವಾರ, ಮಾರ್ಚ್ 7, 2009

ನೆನಪು....

ನೆನಪುಗಳು ಹಾಗೇನೆ, ಮರೆಯಲು ಪ್ರಯತ್ನಿಸಿದಷ್ಟು ತಿರುತಿರುಗಿ ನೆನಪಾಗುತ್ತವೆ. ನೆನಪುಗಳ ನೆನಪಲ್ಲೇ ಅಥವಾ ನೆನಪುಗಳ ಮರೆಯುವ ಪ್ರಯತ್ನದಲ್ಲಿ, ಮರೆಯದಿರು ನಿನ್ನ ಮುಂದಿನ ನೆನಪಾಗಿಸುವ ಕಾರ್ಯವನ್ನ, ನೆನಪಿಸಿಕೊ ನಿನ್ನ ವರ್ತಮಾನದ ಕೇಲಸವನ್ನ,, ನೆನಪಿಸಿಕೋಳ್ಳಬಾರದು ನಮ್ಮ ನೆನಪನ್ನ ನೆನಪಿಸಿಕೋಳ್ಳದವರನ್ನ,, ಮಾಡು ಹಾಗೆ ಕೇಲಸವ ಎಲ್ಲರೂ ನೆನಪಿಸಿಕೋಳ್ಳಬೇಕು ನಿನ್ನ ನೆನಪನ್ನ

ಮಂಗಳವಾರ, ಅಕ್ಟೋಬರ್ 7, 2008

Intruduction








Wait for information.......